ಗುರುವಾಣಿ 1 ಆಂಜನೇಯನ ಜನ್ಮ ರಹಸ್ಯ

 

|| ಓಂ ಆಂಜನೇಯಾಯ ನಮಃ||

ಗುರುವಾಣಿ 1: ಆಂಜನೇಯನ ಜನ್ಮ ರಹಸ್ಯ

Guruvani - Voice of RK


ವಾಯುಪುತ್ರ ಹಾಗೂ ಶ್ರೀ ರಾಮನ ಅಪ್ಪಟ ಭಕ್ತ ಹನುಮಂತನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಅಂಜನಾ ದೇವಿಯ ಮಗನಾದ  ಈತನಿಗೆ ಮಾರುತಿ, ವಾನರವೀರ, ಮಹಾಕಾಯ, ಚಿರಂಜೀವಿ ಮುಂತಾದ ಹೆಸರುಗಳಿವೆ. (ಆಂಜನೇಯ ಅತಿ ಬಲಶಾಲಿ. ಆಕಾಶದಲ್ಲಿ ವಾಯುವಿನ ವೇಗದಲ್ಲಿ ಈತ ಹಾರಬಲ್ಲ.) ಚಿಕ್ಕ ಹುಡುಗನಾಗಿದ್ದಾಗ ಸೂರ್ಯನನ್ನು ನೋಡಿ ಹಣ್ಣು ಎಂದು ಭ್ರಮಿಸಿ ಅದನ್ನು ಹಿಡಿಯಲು ಆಕಾಶಕ್ಕೆ ಜಿಗಿಯುತ್ತಾನೆ, ಇದನ್ನು ನೋಡಿದ ದೇವೇಂದ್ರ ತನ್ನ ವಜ್ರಾಯುಧದಿಂದ ಆತನಿಗೆ ಹೊಡೆಯುತ್ತಾನೆ. ಆ ಬಾಲಕ ಬಂಡೆಯ ಮೇಲೆ ಬಿದ್ದು ಆತನ ಕೆನ್ನೆ ಊದಿಕೊಳ್ಳುತ್ತದೆ.ಅಂದಿನಿಂದ ಈ ಬಾಲಕ ಹನುಮಂತನಾದ

 ರಾಮಾಯಣ ಗ್ರಂಥದಲ್ಲಿ ವಿಶೇಷ ಸ್ಥಾನ ಪಡೆದಿರೋ ಹನುಮಂತ ಅತಿ ಮುಗ್ದ. ಈತ ತನ್ನ ಮುಗ್ದತೆಯಿಂದ ತನ್ನ ಎದೆಯನ್ನೇ ಬಗೆದು ಅದರೊಳಗಿದ್ದ ರಾಮನನ್ನು ತೋರಿಸುತ್ತಾನೆ. ಹನುಮಂತ ಈಶ್ವರನ ಅವತಾರವೇ ಅಥವಾ ಶ್ರೀ ವಿಷ್ಣುವಿನ ಅವತಾರವೇ ಎಂಬುದರ ಬಗ್ಗೆ ಅನೇಕ ಗ್ರಂಥಗಳಲ್ಲಿ ಚರ್ಚೆ ನಡೆದಿದೆ. ಆದರೆ ಇದು ನಮ್ಮ ಚರ್ಚೆಯ ವಿಷಯವಾಗದೆ ದೇವನೊಬ್ಬ ನಾಮ ಹಲವು ಎಂದು ಪರಿಗಣಿಸಿ, ಈಶ್ವರ ಅವತಾರಿಯಾದ ಈ ವಾಯುಪುತ್ರನ ಜನುಮದ ಬಗ್ಗೆ ಒಂದು ಮಾತು. ರಾಮ ಭಕ್ತನ ಜನುಮದ ಬಗ್ಗೆಯೂ ಸಹ ಗ್ರಂಥಗಳಲ್ಲಿ ವಿಭಿನ್ನ ಉಲ್ಲೇಕವಿರುತ್ತದೆ . ಒಂದು  ಮೂಲದ ಪ್ರಕಾರ ಮಾತೆ ಅಂಜನಾ ಹನುಮಂತನ ತಾಯಿ. ಹಿಂದಿನ ಜನ್ಮದಲ್ಲಿ ಈಕೆ ಅಪ್ಸರೆಯಾಗಿ ಇಂದ್ರನ ಆಸ್ಥಾನದಲ್ಲಿದ್ದಳು. . ಒಮ್ಮೆ ಧ್ಯಾನದಲ್ಲಿ ತೊಡಗಿದ್ದ ಸನ್ಯಾಸಿ ಒಬ್ಬರ ತಪಸ್ಸಿನ ಭಂಗಕ್ಕೆ ಪ್ರಯತ್ನ ಮಾಡುತ್ತಾಳೆ. ಇದರಿಂದ ಕುಪಿತಗೊಂಡ ಸನ್ಯಾಸಿ ಮುಂದಿನ ಜನ್ಮದಲ್ಲಿ ಕೋತಿ ಆಗು ಎಂದು ಶಪಿಸುತ್ತಾನೆ. ಈ ಶಾಪ ವಿಮೋಚನೆಗಾಗಿ ಈಕೆ ಇಂದ್ರನನ್ನ ಪ್ರಾರ್ಥಿಸಿಕೊಳ್ಳುತ್ತಾಳೆ,ತನಗೆ ಮುಕ್ತಿ ಕೊಡಬೇಕೆಂದು ಬೇಡಿಕೊಳ್ಳುತ್ತಾಳೆ. ಇವಳ ಪ್ರಾರ್ಥನೆಗೆ ಸ್ಪಂದಿಸಿದ ಇಂದ್ರ ಭೂಮಿಯ ಮೇಲೆ ಪುನಹ ಜನಿಸು ಎಂದು ವರ ಕೊಡುತ್ತಾನೆ. ಇಂದ್ರನ ಶಾಪ ವಿಮೋಚನೆಯಂತೆ ಈಕೆ ಅಂಜನ ಎಂಬ ಹೆಸರಿನಿಂದ ಜನ್ಮ ಪಡೆದುಕೊಳ್ಳುತ್ತಾಳೆ. ಮುಂದೆ ವಾನರ ರಾಜನಾದ ಕೇಸರಿ ಯೊಂದಿಗೆ ಪರಸ್ಪರ ಒಪ್ಪಿ ಮದುವೆಯಾಗುತ್ತಾರೆ. ಆದರೆ ಈ ದಂಪತಿಗಳಿಗೆ ಧೀರ್ಘಕಾಲದ ತನಕ ಸಂತಾನ ಭಾಗ್ಯವಿರಲಿಲ್ಲ. ಈ  ಸಮಸ್ಯೆಯಿಂದ ಪಾರಾಗಲು ಋಷಿಮುನಿಯ ಪರಿಹಾರ ಸೂಚನೆಯಂತೆ ಹನ್ನೆರಡು ವರ್ಷಗಳ ಕಾಲ ಶಿವನನ್ನ  ಆರಾಧಿಸುತ್ತಾಳೆ. ಈ ಧೀರ್ಘ ತಪಸ್ಸಿಗೆ ಒಲಿದ ಈಶ್ವರ ಪ್ರಸನ್ನನಾಗಿ ಪುತ್ರ ಸಂತಾನವನ್ನು ಹರಿಸುತ್ತಾನೆ. ಇದರ ಬಳಿಕ ಅಂಜನ ವಾನರ ಮಗನ ಬಾಲಕನಿಗೆ  ಜನ್ಮನೀಡುತ್ತಾಳೆ. ಈತನೇ ಈಶ್ವರನ ಸ್ವರೂಪಿ ಶ್ರೀ ರಾಮನ ಪರಮ ಭಕ್ತ ಆಂಜನೇಯ. ಕೇಸರಿಪುತ್ರ, ವಾಯುಪುತ್ರ ಇದೇ ಮೊದಲಾದ ನಾಮದ್ಯೇಯ ಗಳಿಂದ ಜಗದ್ವಿಖ್ಯಾತನಾಗುತ್ತಾನೆ. ಹನುಮಂತನ ಜನನದ ನಂತರ ಶಾಪ ವಿಮೋಚನೆಗೊಂಡ ಅಂಜನಾದೇವಿ ಸ್ವರ್ಗಲೋಕಕ್ಕೆ ಹಿಂತಿರುಗುತ್ತಾಳೆ. ಭಕ್ತಿ ಮತ್ತು ಸಮರ್ಪಣೆಗೆ ಪ್ರತಿರೂಪವಾಗಿರುವ ಈ ಆಂಜನೇಯನನ್ನು ನಾವು ಮತ್ತೆ ಮತ್ತೆ ಸ್ಮರಿಸೋಣ.

|| ಓಂ ಆಂಜನೇಯಾಯ ನಮಃ||

Voice of RK